ದಿಟ್ಥಿಸುತ್ತಿರುವೆ ಅಳೆಯಲಾಗದ ದೂರವನ್ನ
ಬೆಟ್ಟಗಳ ಸಾಲು ...ನಿನ್ನ ನೆನಪಿನಂತೆಯೇ .....
ಒಂದರ ಹಿಂದೆ ಒಂದು ..ಅಲ್ಲೇ ಇಣುಕುವ ಇನ್ನೊಂದು ..
ಕಂಡು ಕಾಣದ ಮತ್ತೊಂದು .....
ಶಿಖರದ ತುದಿಯನ್ನಪ್ಪುತಿಹ ಭಾರ ಕಾರ್ಮೋಡ ...
ನನ್ನ ಮನಸ್ಸಿನಂತೆಯೇ ...
ನಿಟ್ಟುಸಿರ ಜೊತೆಜೊತೆಗೆ ಧಾರಾಕಾರ ವರ್ಷಧಾರೆ
ದೃಶ್ಯ ಮಸುಕಾಯಿತು ....
ಬೆಟ್ಟಗಳ ಸಾಲು ಕಾಣದಾಯಿತು .
ಅಲ್ಲಲ್ಲ....ದೃಷ್ಟಿ ಮಸುಕಾಯಿತು...
ಕಂಬನಿಯ ತೆರೆಯಿಂದ
ನಿರೀಕ್ಷಣೆ ವ್ಯರ್ಥವೆಂಬ ಸತ್ಯದಿಂದ.....