ಅಲೆಗಳು ಜಿಗಿಜಿಗಿದು ಬರುತ್ತಿವೆ
ನಿನ್ನ ನೆನಪುಗಳ ಹೊತ್ತು....
ಮೈಯನ್ನು ತೋಯಿಸುತ್ತಿವೆ
ಮನಸ್ಸನ್ನು ಸಹ....!!
ಅಪ್ಪಿ ಕೊಳ್ಳಬೇಕೆನ್ನುವಷ್ಟರಲ್ಲಿ..ಕೈ ತಪ್ಪಿ ಓಡುತ್ತಿವೆ.....
ಅವು ಬಂದಲ್ಲಿಗೆ....ನಿನ್ನಲ್ಲಿಗೆ....
ಬೇಡ ಕಣೆ..ಒಮ್ಮೆಯಾದರೂ ....
ಬಿಗಿದಪ್ಪಿ ಮುದ್ದಾಡಿಬಿಡು ಬಿಡು..
ಈ ಮರಳುಗೂಡನ್ನು
ಪುಡಿಯಾದರೂ ಚಿಂತೆಯಿಲ್ಲಾ...
ಮತ್ತೆ ನನ್ನನ್ನು ತಟ್ಟಿ ಕಟ್ಟಲು
ಬಂದೇ ಬರುತ್ತಿಯಲ್ಲವೇ ನೀನು..??!!
ನೆನಪಾಗಲ್ಲ .....ನಿಜವಾಗಿಯೂ ....!!!