Sunday, January 30, 2011

ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೆ...



ದೇವರು ಭಾವನೆಗಳನ್ನು ಮನುಷ್ಯನಲ್ಲಿ ತುಂಬುವುದರ ಜೊತೆಜೊತೆಗೆ ಸಂಬಧಗಳನ್ನು ಸೃಷ್ಟಿಸಿರಬೇಕು.ನಮ್ಮ ಮನಸ್ಥಿತಿಗೆ ಅನುಗುಣವಾಗಿ
ಬಾಂಧವ್ಯಗಳಿಗೆ ಹೆಸರಿಟ್ಟು ಅದನ್ನು ಗೌರವಿಸುವವರು ನಾವು ..ಆದರೆ ಪರಿವರ್ತನೆ ಜಗದ ನಿಯಮ ಎನ್ನುವಂತೆ ಸಂ ಬಂಧಗಳು ಬದಲಾಗುವ ಸಾದ್ಯತೆಗಳು,ಸನ್ನಿವೇಶಗಳು ಸಾಮಾನ್ಯ..ಈ ಮನೋಮಂದಲದಲ್ಲಿ ಎಲ್ಲ ತರಹದ ಸಂಬಂದಗಳಿಗೂ ಸ್ಥಾನವಿದೆ,ಅರ್ಥವಿದೆ..
ಅವುಗಳ ಬಗೆಗೆ ಕಾಳಜಿ ,ಜವಾಬ್ದಾರಿ ಎರಡೂ ಇದೆ .ಎಲ್ಲವೂ ತಿಳಿದು ಬಹುಮುಖ್ಯ ಸಮಯದಲ್ಲಿಯೇ ಇವೆಲ್ಲವನ್ನೂ ಮನಸ್ಸು ಮರೆಯುವುದೇಕೆ??ನಿರ್ಧಾರವನ್ನು ವಿಶ್ಲೇಷಿಸಲು ಇಷ್ಟಪಡದ ಜಾಣ ಕಿವುಡೇಕೆ ಈ ಬುದ್ದಿಗೆ?                                                                     
ಇದು ಖಂಡಿತ ಸರಿಯಲ್ಲ..ಸಂಬಂದಗಳಿಗೆ ಮೋಸ ಮಾಡಿದಾಗ ಸಂಬಧಿಗಳಿಗಾಗುವ ನೋವು ಅಗಾಧ..ಇದು ಮನಸ್ಸುಗಳನ್ನು ಮುರಿಯಲೂಬಹುದು .ಒಮ್ಮೆ ಯೋಚಿಸಿ .....ಒಂದು ಉತ್ತಮ ಬಾಂಧವ್ಯದ ಹೆಸರಿನಲ್ಲಿ ಬೆಸೆದುಕೊಂಡ ಬದುಕುಗಳು ಬೇರೆಯಾದಾಗ ಅಲ್ಲಿಯವರೆಗಿನ 
ಆ ಬೆಸುಗೆಗೆ ಏನೆನ್ನಬಹುದು..??!ಬರಿಯ ನಾಟಕವೆಂದಾ !!?..ಬದುಕು ಬರಿ ನಾಟಕವಲ್ಲ ...ಆದರೆ ಬದಲಾಗುವ ಭಾವನೆಗಳೇ ಬದುಕಲ್ಲ.....
                                                                                                                                                                                                                   
ಇಷ್ಟಪಡುವುದು  ಅಪರಾಧವಲ್ಲ ನಿಜ..ಆದರೆ ಅದಕ್ಕೆ ಪ್ರತಿಯಾಗಿ ಇಷ್ಟವನ್ನೇ ನಿರೀಕ್ಷಿಸುವುದು ಮೂರ್ಖತನ ..ಕಾಡದಿರಿ ಕಾಳಜಿ ತೋರುವ
ಮನಸ್ಸುಗಳನ್ನು ..ಕೊಲ್ಲದಿರಿ ಸಂಬಂಧಗಳನ್ನು ...ಸಾಧ್ಯವಾದರೆ ಹುಚ್ಚು ಕುದುರೆಯಾಗುವ ಮನಸ್ಸಿಗೆ ಕಡಿವಾಣ ಹಾಕಿ......                 
                                     
                                       ನಿಂತ ನೀರ ಕಲಕಬೇಡಿ ಕಲ್ಲುಗಳೇ
                                      ಹೂದಳಗಳ ಇರಿಯಬೇಡಿ ಮುಳ್ಳುಗಳೇ
                                      ಏನಿದೆಯೋ ಏನೋ ಅವಕೆ ತಮ್ಮದೇನೋ ..
                                      ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೆ....

1 comment: